ಕರ್ನಾಟಕ ಸಾರಿಗೆ ಇಲಾಖೆ ಹೊಸ ಸ್ಮಾರ್ಟ್ ಕಾರ್ಡ್ DL ಮತ್ತು RC ಯೋಜನೆಯನ್ನು ಅಧಿಕೃತವಾಗಿ ಆರಂಭಿಸಿದೆ. ಡಿಸೆಂಬರ್ 1ರಿಂದ ವಾಹನ ನೋಂದಣಿ ಪತ್ರ (RC) ಮತ್ತು ಡಿಸೆಂಬರ್ 15ರಿಂದ ಚಾಲನಾ ಪರವಾನಗಿ (DL)ಗಳನ್ನು ಹೊಸ ಪಾಲಿಕಾರ್ಬೊನೇಟ್ ಸ್ಮಾರ್ಟ್ ಕಾರ್ಡ್ ಮಾದರಿಯಲ್ಲಿ ವಿತರಿಸಲಾಗುತ್ತದೆ. ಈ ಕಾರ್ಡ್‌ಗಳು ಹೆಚ್ಚು ಭದ್ರತೆ ಮತ್ತು ದೀರ್ಘಕಾಲಿಕ ಬಳಕೆಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಹೊಸ ಸ್ಮಾರ್ಟ್ ಕಾರ್ಡ್‌ನ ಪ್ರಮುಖ ವಿಶೇಷತೆಗಳು
- ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಒಂದೇ ಮಾದರಿಯ ಸ್ಮಾರ್ಟ್ ಕಾರ್ಡ್‌ಗಳು ದೇಶಾದ್ಯಂತ ಜಾರಿಗೊಳ್ಳಲಿದೆ.
- ಕಾರ್ಡ್ Polycarbonate material ಬಳಸಿ ತಯಾರಿಸಲಾಗಿದ್ದು Laser engraving ತಂತ್ರಜ್ಞಾನದಿಂದ ಮುದ್ರಿಸಲಾಗಿದೆ.
- 64 KB ಸಾಮರ್ಥ್ಯದ ಮೈಕ್ರೋ ಚಿಪ್ ಮತ್ತು NIC-generated QR Code ಸೇರಿಸಲಾಗಿದೆ.
- ಕಾರ್ಡ್‌ಗಳನ್ನು ಕೇಂದ್ರಿಕೃತ ಮುದ್ರಣ ಕೇಂದ್ರದಲ್ಲಿ ಮುದ್ರಿಸಿ, ಸ್ಥಳೀಯ RTO ಕಚೇರಿಗಳಿಗೆ ಕಳಿಸಿ, ನಂತರ Speed Post ಮೂಲಕ ಅರ್ಜಿದಾರರಿಗೆ ರವಾನಿಸಲಾಗುತ್ತದೆ.
ಕಾರ್ಡ್ ಮುದ್ರಣ ಸಾಮರ್ಥ್ಯ
ಇಟಲಿಯಿಂದ ಆಮದು ಮಾಡಿರುವ ಅತ್ಯಾಧುನಿಕ ಮುದ್ರಣ ಯಂತ್ರದ ಮೂಲಕ:
- ಗಂಟೆಗೆ 500–600 ಕಾರ್ಡ್‌ಗಳು
- ಒಂದು ದಿನಕ್ಕೆ 15–16 ಸಾವಿರ ಕಾರ್ಡ್‌ಗಳ ಮುದ್ರಣ ಸಾಮರ್ಥ್ಯ
ಶುಲ್ಕ ಎಷ್ಟು?
ಪ್ರತಿ ಸ್ಮಾರ್ಟ್ ಕಾರ್ಡ್‌ಗೆ ಒಟ್ಟು ಶುಲ್ಕ: ₹200
- ಸೇವಾದಾರರ ಪಾಲು: ₹64.46
- ಸರ್ಕಾರದ ಪಾಲು: ₹135.54
RC ಸ್ಮಾರ್ಟ್ ಕಾರ್ಡ್‌ನಲ್ಲಿ ಏನು–ಏನು ಇರುತ್ತದೆ?
RC ಕಾರ್ಡ್‌ನಲ್ಲಿರುವ ವಿವರಗಳು:
- ವಾಹನ ನೋಂದಣಿ ಸಂಖ್ಯೆ
- ನೋಂದಣಿ ದಿನಾಂಕ ಮತ್ತು ಮಾಲೀಕತ್ವ ವಿವರಗಳು
- ಚಾಸಿಸ್ & ಎಂಜಿನ್ ಸಂಖ್ಯೆ
- ಮಾಲೀಕರ ಹೆಸರು ಮತ್ತು ವಿಳಾಸ
- ಇಂಧನ ಪ್ರಮಾಣ (Emission Norms)
- ತಯಾರಿಕೆಯ ತಿಂಗಳು–ವರ್ಷ
- ಸಿಲಿಂಡರ್, ಆಕ್ಸಲ್ ಸಂಖ್ಯೆ
- ವಾಹನದ ಮಾದರಿ, ಬಣ್ಣ
- ಆಸನ ಸಾಮರ್ಥ್ಯ, ನಿಲ್ಲುವ ಸಾಮರ್ಥ್ಯ, ಸ್ಲೀಪರ್ ಸಾಮರ್ಥ್ಯ
- ಹೊರೆಯಿಲ್ಲದ ತೂಕ, ಹೊರೆ ತೂಕ
- ಒಟ್ಟು ಸಂಯೋಜಿತ ತೂಕ
- ಕ್ಯೂಬಿಕ್ ಕ್ಯಾಪಾಸಿಟಿ, Horse Power, Wheel Base ಮುಂತಾದ ವಿವರಗಳು
DL ಸ್ಮಾರ್ಟ್ ಕಾರ್ಡ್ ವಿತರಣೆ ಯಾವಾಗ?
ಡಿಸೆಂಬರ್ 15ರಿಂದ ಹೊಸ DL ಸ್ಮಾರ್ಟ್ ಕಾರ್ಡ್‌ಗಳು ಸಂಪೂರ್ಣ ತಾಂತ್ರಿಕ ಏಕೀಕರಣ (NIC software integration) ನಂತರ ವಿತರಿಸಲಾಗುತ್ತದೆ.
