ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಸಿಎಂ ಕುರ್ಚಿಯ ಮುಸುಕಿನ ಗುದ್ದಾಟ ‘ಬ್ರೇಕ್ ಫಾಸ್ಟ್ ಮೀಟಿಂಗ್’ ನಂತರವೂ ಮುಗಿದಿಲ್ಲವೇ? ಈ ಪ್ರಶ್ನೆಗೆ ಮೈಸೂರಿನಿಂದ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಒಂದು ಸ್ಪೋಟಕ ಹೇಳಿಕೆ ಹೊಸ ತಿರುವು ನೀಡಿದೆ. ‘ನಾಯಕತ್ವ ಬದಲಾವಣೆಯಿಲ್ಲ ಮತ್ತು ಐದು ವರ್ಷವೂ ಸಿದ್ದರಾಮಯ್ಯರೇ ಸಿಎಂ ಆಗಿ ಮುಂದುವರಿಯಲಿದ್ದಾರೆ’ ಎಂದು ಯತೀಂದ್ರ ಮಾಧ್ಯಮಗಳಿಗೆ ಖಚಿತವಾಗಿ ಹೇಳಿದ್ದಾರೆ. ಈ ಹೇಳಿಕೆ ಹೈಕಮಾಂಡ್‌ನ ಅಧಿಕೃತ ನಿಲುವಿನ ಪ್ರತಿಬಿಂಬವೇ? ಅಥವಾ ಡಿಕೆ ಶಿವಕುಮಾರ್ ಅವರಿಗೆ ಬಹಿರಂಗ ಸವಾಲೇ? ಯತೀಂದ್ರರ ಈ ಮಾತುಗಳು ಡಿಕೆಶಿ ಬಣದಲ್ಲಿ ತೀವ್ರ ಆತಂಕಕ್ಕೆ ಹಾಗೂ ಅಸಮಾಧಾನಕ್ಕೆ ಕಾರಣವಾಗಿರುವುದು ಸ್ಪಷ್ಟ. ವಿಪಕ್ಷಗಳು ಹುಟ್ಟುಹಾಕುತ್ತಿರುವ ವದಂತಿಗಳಿಗೆ ತೆರೆ ಬೀಳುವುದಕ್ಕಿಂತ ಹೆಚ್ಚಾಗಿ, ಈ ‘ಸ್ಪೋಟಕ’ ಹೇಳಿಕೆಯು ಕರ್ನಾಟಕ ಕಾಂಗ್ರೆಸ್‌ನಲ್ಲಿ ಆಂತರಿಕ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸುತ್ತಿದೆಯೇ?
