ರಾಜಕೀಯರಾಜ್ಯಬೆಂಗಳೂರು

ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು: ಗೃಹಲಕ್ಷ್ಮಿ ಫಲಾನುಭವಿಗಳಲ್ಲಿ ‘ಅನರ್ಹತೆ’ ಭಾವನೆ ಮೂಡಿಸಿರುವ ಸಮೀಕ್ಷೆ ವರದಿ

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ಬಹುಪಾಲು ಫಲಾನುಭವಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿ ಶೇ.80 ರಷ್ಟು ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಿದ್ದರೂ, ಗೃಹಲಕ್ಷ್ಮಿ ಯೋಜನೆಯ ಕೆಲವು ಫಲಾನುಭವಿಗಳಲ್ಲಿ ತಾವು ಈ ನೆರವಿಗೆ ಅರ್ಹರಲ್ಲ ಎಂಬ ಭಾವನೆ ಉಂಟಾಗಿರುವುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಬೆಂಗಳೂರು ನಗರದಲ್ಲಿ ಲೋಕನೀತಿ–ಸಿಎಸ್‌ಡಿಎಸ್ ಮತ್ತು ಇಂಡಸ್ ಆಕ್ಷನ್ ಸಂಸ್ಥೆಗಳು ನಡೆಸಿದ ಸಮೀಕ್ಷೆಯ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಜುಲೈ 2024 ರಿಂದ ಜುಲೈ 2025ರ ಅವಧಿಯಲ್ಲಿ 15 ಜಿಲ್ಲೆಗಳ 6,125 ಮಹಿಳಾ ಫಲಾನುಭವಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣವನ್ನು ಹೆಚ್ಚಿನವರು ಕುಟುಂಬದ ಅಗತ್ಯಗಳು, ಸಾಲ ಮರುಪಾವತಿ, ಮಕ್ಕಳ ಶಿಕ್ಷಣ ಶುಲ್ಕ ಹಾಗೂ ದೈನಂದಿನ ಖರ್ಚುಗಳಿಗೆ ಬಳಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಆದರೆ ಕೆಲವರಲ್ಲಿ ಯೋಜನೆಗೆ ಸಂಬಂಧಿಸಿದ ತಪ್ಪು ಅರ್ಥೈಸಿಕೆಗಳಿಂದಾಗಿ ತಾವು ಅನರ್ಹರು ಎಂಬ ಭಾವನೆ ಮೂಡಿರುವುದು, ಮಹಿಳೆಯರ ದೀರ್ಘಾವಧಿ ಉದ್ಯೋಗ ಮತ್ತು ಉದ್ಯಮಶೀಲತೆಗೆ ಅಡ್ಡಿಯಾಗುತ್ತಿದೆ ಎಂದು ವರದಿ ಎಚ್ಚರಿಸಿದೆ. ಅನಿಯಮಿತ ಪಾವತಿಗಳು ಮಾಸಿಕ ಹಣಕಾಸು ಯೋಜನೆಗೆ ತೊಂದರೆ ಉಂಟುಮಾಡುತ್ತಿರುವುದನ್ನೂ ಅದು ಉಲ್ಲೇಖಿಸಿದೆ.

ಇದೇ ವೇಳೆ ‘ಶಕ್ತಿ’ ಯೋಜನೆಯಿಂದ ಮಹಿಳೆಯರು ಖಾಸಗಿ ಸಾರಿಗೆಯಿಂದ ಸಾರ್ವಜನಿಕ ಬಸ್‌ಗಳಿಗೆ ತಿರುಗಿದ್ದು, ಕರ್ನಾಟಕದ ಆರ್ಥಿಕ ಚಟುವಟಿಕೆಗೆ ಶೇ.96 ರಷ್ಟು ವ್ಯಾಪ್ತಿಯಲ್ಲಿ ಧನಾತ್ಮಕ ಪರಿಣಾಮ ಬೀರಿದೆ ಎಂದು ಸಮೀಕ್ಷೆ ಹೇಳಿದೆ. ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಸುತ್ತಮುತ್ತಲಿನ ಮಹಿಳೆಯರು ಕ್ಯಾಬ್‌ಗಳ ಬದಲು ಸರ್ಕಾರಿ ಬಸ್‌ಗಳನ್ನು ಬಳಸುತ್ತಿರುವುದು ಸ್ಪಷ್ಟವಾಗಿದೆ.

Related posts

ಜನೌಷಧಿ ಕೇಂದ್ರಗಳ ಬೆಳವಣಿಗೆಯಲ್ಲಿ ದಕ್ಷಿಣ ರಾಜ್ಯಗಳ ಮುನ್ನಡೆ

digitalbharathi24@gmail.com

ಪ್ರಧಾನಿ ಮೋದಿ ಉಡುಪಿ ಭೇಟಿ: ಭದ್ರತಾ ಕ್ರಮ ಕಠಿಣ – ಅಂಗಡಿ ಬಂದ್, ನೋ ಫ್ಲೈ ಝೋನ್ ಜಾರಿ

admin@kpnnews.com

ಬೆಳಗಾವಿ ಚಳಿಗಾಲದ ಅಧಿವೇಶನ: 10 ದಿನಗಳಲ್ಲಿ 23 ವಿಧೇಯಕಗಳಿಗೆ ಅಂಗೀಕಾರ

digitalbharathi24@gmail.com
Latest news
ಬೆಳಗಾವಿ ಚಳಿಗಾಲದ ಅಧಿವೇಶನ: 10 ದಿನಗಳಲ್ಲಿ 23 ವಿಧೇಯಕಗಳಿಗೆ ಅಂಗೀಕಾರ ರಾಜ್ಯಸಭೆಯಲ್ಲಿ ಮಧ್ಯರಾತ್ರಿ ಜಿ ರಾಮ್‌ ಜಿ ಮಸೂದೆ ಅಂಗೀಕಾರ; ವಿಪಕ್ಷಗಳ ತೀವ್ರ ಆಕ್ರೋಶ ಟಿ-20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ; ಶುಭ್‌ಮನ್ ಗಿಲ್ ಹೊರಗೆ, ಇಶಾನ್ ಕಿಶಾನ್‌ಗೆ ಕಂಬ್ಯಾಕ್ ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಮುಂದುವರಿದ ಶೀತದಲೆಯ ಅಬ್ಬರ; 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, 10 ಜಿಲ್ಲೆಗಳಿಗೆ... ಬೇಡಿಕೆ ಈಡೇರಿದೆ, ನನ್ನ–ಸಿಎಂ ನಡುವೆ ಒಪ್ಪಂದವಾಗಿದೆ; ಹೈಕಮಾಂಡ್ ಬೆಂಬಲದಿಂದಲೇ ಅವರು ಮುಖ್ಯಮಂತ್ರಿ: ಡಿ.ಕೆ. ಶಿವಕುಮಾರ... ಬೇರೆ ಧರ್ಮದವನನ್ನು ಮದುವೆಯಾದರೆ ಮಗಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಬೆಳಗಾವಿ ಚಳಿಗಾಲ ಅಧಿವೇಶನ: ಉತ್ತರ–ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕೇಂದ್ರದ ನೆರವು ಕೋರಿ ನಿರ್ಣಯಗಳಿಗೆ ವಿಧಾನಸಭೆಯ ಸರ... ಮೋದಿ ಓಮನ್ ಭೇಟಿ… ಪಾಕ್–ಚೀನಾ ಏಕೆ ಪತರಗುಟ್ಟಿವೆ? ಹಿಜಾಬ್ ವಿಚಾರ ತೀವ್ರಗೊಂಡ ಬೆನ್ನಲ್ಲೇ ಸಿಎಂ ನಿತೀಶ್ ಕುಮಾರ್ ವಿರುದ್ಧ ದೂರು: ಬೆದರಿಕೆ ಎಚ್ಚರಿಕೆಯಿಂದ ಭದ್ರತೆ ಮತ್ತಷ್... ‘ಕೈ’ ಕಮಾಂಡ್‌ ತೃಪ್ತಿಗೆ ರಾಜ್ಯದ ಖಜಾನೆ ಖಾಲಿ ಮಾಡುತ್ತಿದ್ದಾರೆ’: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ...