ರಾಜಕೀಯ

‘ವಿಜಯೇಂದ್ರನೇ ಕಲೆಕ್ಷನ್ ಕಿಂಗ್; ಯಡಿಯೂರಪ್ಪ ಅವರ ಹೆಸರನ್ನು ಕೆಡಿಸಿದ್ದು ಅವರೇ’ – ಡಿ.ಕೆ.ಶಿವಕುಮಾರ್ ವಾಗ್ದಾಳಿ

ಬೆಳಗಾವಿ:
ಫೆಬ್ರವರಿ–ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ, ಬಡವರ ಹಣವನ್ನು ಲೂಟಿ ಮಾಡಿದೆ ಎಂಬ ವಿರೋಧ ಪಕ್ಷ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಆರೋಪಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್,
“ರಾಜ್ಯದಲ್ಲಿ ನಿಜವಾದ ಕಲೆಕ್ಷನ್ ಕಿಂಗ್ ಯಾರಾದರೂ ಇದ್ದರೆ ಅದು ಬಿ.ವೈ. ವಿಜಯೇಂದ್ರ. ಅವರ ಕಲೆಕ್ಷನ್ ಬಗ್ಗೆ ಬಿಚ್ಚಿಡಬೇಕಾ?” ಎಂದು ಪ್ರಶ್ನಿಸಿದರು. ವಿಜಯೇಂದ್ರ ಅವರಿಗೆ ರಾಜಕೀಯ ಅನುಭವದ ಕೊರತೆಯಿದೆ ಎಂದು ಟೀಕಿಸಿದ ಅವರು, “ತಂದೆ ಯಡಿಯೂರಪ್ಪ ಅವರ ಹೆಸರನ್ನು ಕೆಡಿಸಿದ್ದು ಕೂಡ ವಿಜಯೇಂದ್ರನೇ” ಎಂದು ಕಿಡಿಕಾರಿದರು.

ವಿರೋಧ ಪಕ್ಷದ ಆರೋಪಗಳಿಗೆ ಮಿತಿ ಇರಬೇಕು ಎಂದು ಹೇಳಿದ ಡಿ.ಕೆ.ಶಿವಕುಮಾರ್,
“ರಾಜ್ಯದ ಯಾವ ಖಜಾನೆ ಖಾಲಿಯಾಗಿದೆ? ಈ ಬಗ್ಗೆ ಸದನಕ್ಕೆ ಬಂದು ಮಾತನಾಡಲಿ. ಹೊರಗೆ ಹೇಳಿಕೆ ನೀಡುವುದಲ್ಲ, ಧೈರ್ಯ ಇದ್ದರೆ ಸದನದಲ್ಲಿ ಪ್ರಶ್ನೆ ಮಾಡಲಿ” ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

ಸದನದಲ್ಲೇ ಉತ್ತರ ನೀಡಲಾಗುವುದು

ಇಂದು ಹಾಗೂ ನಾಳೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವರು ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ವಿವರವಾಗಿ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದ ಅವರು,
“ಮಹದಾಯಿ ಹಾಗೂ ನೀರಾವರಿ ಅಭಿವೃದ್ಧಿ ವಿಷಯದಲ್ಲಿಯೂ ನಾನೇ ಉತ್ತರ ನೀಡುತ್ತೇನೆ” ಎಂದರು.

ರೈತರ ಪರ ಸರ್ಕಾರ – ಡಿಕೆಶಿ ಸ್ಪಷ್ಟನೆ

ರಾಜ್ಯ ಸರ್ಕಾರ ರೈತರ ಹಿತ ಕಾಯುತ್ತಿದೆ ಎಂದು ಪುನರುಚ್ಚರಿಸಿದ ಡಿ.ಕೆ.ಶಿವಕುಮಾರ್,
“ಕಬ್ಬು ಹಾಗೂ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಲಾಗಿದೆ. ಇದರಿಂದ ಸರ್ಕಾರಕ್ಕೂ, ಸಕ್ಕರೆ ಕಾರ್ಖಾನೆಗಳಿಗೂ ದೊಡ್ಡ ಆರ್ಥಿಕ ಹೊರೆಯಾಗಿದೆ. ಇದನ್ನು ರೈತರು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣದ ಉಲ್ಲೇಖ

ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಈಗಾಗಲೇ ಕೈಬಿಡಲಾಗಿದೆ ಎಂದು ಹೇಳಿದ ಅವರು,
“ಒಂದು ಎಫ್‌ಐಆರ್ ಮಾತ್ರ ಬಾಕಿ ಇದೆ. ಅದನ್ನೂ ಹಿಂಪಡೆದರೆ ಉತ್ತಮ” ಎಂದರು.

ಗೃಹಲಕ್ಷ್ಮಿ ಯೋಜನೆ ಕುರಿತು ಸರ್ಕಾರದಿಂದ ಯಾವುದೇ ತಪ್ಪು ಮಾಹಿತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ ಡಿಕೆಶಿ,
“ನ್ಯಾಷನಲ್ ಹೆರಾಲ್ಡ್ ವಿಚಾರದಲ್ಲಿ ನಾವು ಧ್ವನಿ ಎತ್ತುತ್ತಿರುವುದರಿಂದ ಬಿಜೆಪಿಯವರು ಮುಖ್ಯ ವಿಚಾರಗಳಿಂದ ಜನರ ಗಮನ ತಪ್ಪಿಸಲು ಗೃಹಲಕ್ಷ್ಮಿ ವಿಷಯವನ್ನು ಎತ್ತುತ್ತಿದ್ದಾರೆ” ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Related posts

ಪುಟಿನ್–ಮೋದಿ ಭೇಟಿ: ಭೋಜನಕೂಟ ರಾಜಕೀಯ ಕುತೂಹಲಕ್ಕೆ ಕಾರಣ! ರಾಹುಲ್ ಮತ್ತು ಖರ್ಗೆ ಗೈರು, ಶಶಿ ತರೂರ್ ಮಾತ್ರ ಆಹ್ವಾನಿತರು

digitalbharathi24@gmail.com

ಸಿಎಂ ಕುರ್ಚಿಗೆ ಮಹಾ ಟ್ವಿಸ್ಟ್: ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಉತ್ತರಾಧಿಕಾರಿ ಹೆಸರೇ ಹೇಳಿದ್ರಾ?

digitalbharathi24@gmail.com

ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು: ಗೃಹಲಕ್ಷ್ಮಿ ಫಲಾನುಭವಿಗಳಲ್ಲಿ ‘ಅನರ್ಹತೆ’ ಭಾವನೆ ಮೂಡಿಸಿರುವ ಸಮೀಕ್ಷೆ ವರದಿ

digitalbharathi24@gmail.com
Latest news
ಬೆಳಗಾವಿ ಚಳಿಗಾಲದ ಅಧಿವೇಶನ: 10 ದಿನಗಳಲ್ಲಿ 23 ವಿಧೇಯಕಗಳಿಗೆ ಅಂಗೀಕಾರ ರಾಜ್ಯಸಭೆಯಲ್ಲಿ ಮಧ್ಯರಾತ್ರಿ ಜಿ ರಾಮ್‌ ಜಿ ಮಸೂದೆ ಅಂಗೀಕಾರ; ವಿಪಕ್ಷಗಳ ತೀವ್ರ ಆಕ್ರೋಶ ಟಿ-20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ; ಶುಭ್‌ಮನ್ ಗಿಲ್ ಹೊರಗೆ, ಇಶಾನ್ ಕಿಶಾನ್‌ಗೆ ಕಂಬ್ಯಾಕ್ ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಮುಂದುವರಿದ ಶೀತದಲೆಯ ಅಬ್ಬರ; 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, 10 ಜಿಲ್ಲೆಗಳಿಗೆ... ಬೇಡಿಕೆ ಈಡೇರಿದೆ, ನನ್ನ–ಸಿಎಂ ನಡುವೆ ಒಪ್ಪಂದವಾಗಿದೆ; ಹೈಕಮಾಂಡ್ ಬೆಂಬಲದಿಂದಲೇ ಅವರು ಮುಖ್ಯಮಂತ್ರಿ: ಡಿ.ಕೆ. ಶಿವಕುಮಾರ... ಬೇರೆ ಧರ್ಮದವನನ್ನು ಮದುವೆಯಾದರೆ ಮಗಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಬೆಳಗಾವಿ ಚಳಿಗಾಲ ಅಧಿವೇಶನ: ಉತ್ತರ–ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕೇಂದ್ರದ ನೆರವು ಕೋರಿ ನಿರ್ಣಯಗಳಿಗೆ ವಿಧಾನಸಭೆಯ ಸರ... ಮೋದಿ ಓಮನ್ ಭೇಟಿ… ಪಾಕ್–ಚೀನಾ ಏಕೆ ಪತರಗುಟ್ಟಿವೆ? ಹಿಜಾಬ್ ವಿಚಾರ ತೀವ್ರಗೊಂಡ ಬೆನ್ನಲ್ಲೇ ಸಿಎಂ ನಿತೀಶ್ ಕುಮಾರ್ ವಿರುದ್ಧ ದೂರು: ಬೆದರಿಕೆ ಎಚ್ಚರಿಕೆಯಿಂದ ಭದ್ರತೆ ಮತ್ತಷ್... ‘ಕೈ’ ಕಮಾಂಡ್‌ ತೃಪ್ತಿಗೆ ರಾಜ್ಯದ ಖಜಾನೆ ಖಾಲಿ ಮಾಡುತ್ತಿದ್ದಾರೆ’: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ...