ವಿಶಾಖಪಟ್ಟಣಂ, ಡಿ. 6:
ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಎರಡು ಶತಕ ಬಾರಿಸಿ ಅದ್ಭುತ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ, ಶನಿವಾರ ವೈజಾಗ್‌ನಲ್ಲಿ ನಡೆಯುವ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಸೌರವ್ ಗಂಗೂಲಿ ಅವರ ದಾಖಲೆ ಸರಿಗಟ್ಟಲು ಸಜ್ಜಾಗಿದ್ದಾರೆ.
ಕೊಹ್ಲಿ ಪಂದ್ಯದಲ್ಲಿ ಕಣಕ್ಕಿಳಿದೊಡನೆಯೇ, ಭಾರತ ಪರ ಹೆಚ್ಚು ಏಕದಿನ ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ಗಂಗೂಲಿಯ ಸಮಬಲ ತಲುಪುತ್ತಾರೆ.
ಸದ್ಯ ಗಂಗೂಲಿ 311 ಪಂದ್ಯಗಳು, ಕೊಹ್ಲಿ 310 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.
ಭಾರತ ಪರ ಹೆಚ್ಚು ಏಕದಿನ ಪಂದ್ಯಗಳು (ಟಾಪ್ ಪ್ಲೇಯರ್‌ಗಳು):
- ಸಚಿನ್ ತೆಂಡೂಲ್ಕರ್ – 463
- ಎಂಎಸ್ ಧೋನಿ – 347
- ರಾಹುಲ್ ದ್ರಾವಿಡ್ – 340
- ಮೊಹಮ್ಮದ್ ಅಜರುದ್ದೀನ್ – 334
- ಸೌರವ್ ಗಂಗೂಲಿ – 311
ಕೊಹ್ಲಿ 2008 ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನಕ್ಕೆ ಪದಾರ್ಪಣೆ ಮಾಡಿದ ಬಳಿಕ ಈಗ 17ನೇ ವರ್ಷದಲ್ಲೂ ಅದೇ ಜೋಶ್‌ನಲ್ಲಿದ್ದಾರೆ.
ಸರಣಿ 1-1 — ವೈಜಾಗ್ ಪಂದ್ಯ ‘ಮೇಕ್ ಅರ್ ಬ್ರೇಕ್’
ಮೊದಲ ಪಂದ್ಯದಲ್ಲಿ ಭಾರತ ಗೆದ್ದು, ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹೀಗಾಗಿ ಸರಣಿ ಈಗ 1-1 ಸಮಬಲ.
ವಿಜಯವಾದ ತಂಡವೇ ಸರಣಿ ಮುಡಿಗೇರಿಸಿಕೊಳ್ಳಲಿದೆ.
ಇತ್ತೀಚಿನ ಟೆಸ್ಟ್ ಸರಣಿ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಭಾರತ ತೀವ್ರ ತವಕದಲ್ಲಿದೆ.
ಪಿಚ್ ವರದಿ — ಬ್ಯಾಟಿಂಗ್ ಗೆ ಸ್ವರ್ಗ, ಬೌಲರ್‌ಗಳಿಗೆ ಸಹ ಆಯ್ಕೆಯಿದೆ
ವಿಶಾಖಪಟ್ಟಣಂನ ಡಾ. ವೈ.ಎಸ್. ರಾಜಶೇಖರ್ ರೆಡ್ಡಿ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ ಸ್ನೇಹಿ.
ಕೊಹ್ಲಿ, ಋತುರಾಜ್ ಹಾಗೂ ರಾಹುಲ್ ಉತ್ತಮ ಫಾರ್ಮ್‌ನಲ್ಲಿರುವುದರಿಂದ ಮತ್ತೊಂದು 300+ ಸ್ಕೋರ್ ಸಾಧ್ಯ.
- ಬೌಲರ್‌ಗಳಿಗೆ ಬೌನ್ಸ್ ಮತ್ತು ವೇಗ ದೊರೆಯುವ ಸಾಧ್ಯತೆ
- ಈ ಪಿಚ್‌ನಲ್ಲಿ ಇದುವರೆಗೆ ಯಾರೂ 300+ ಗುರಿ ಬೆನ್ನಟ್ಟಿಲ್ಲ
→ ಆದ್ದರಿಂದ ಮೊದಲ ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಅನುಕೂಲ
ಸಂಭಾವ್ಯ ತಂಡಗಳು
ಭಾರತ
ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ (ನಾಯಕ), ಋತುರಾಜ್ ಗಾಯಕ್ವಾಡ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಅರ್ಶ್‌ದೀಪ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ.
ದಕ್ಷಿಣ ಆಫ್ರಿಕಾ
ಕ್ವಿಂಟನ್ ಡಿ ಕಾಕ್ (ವಿ.ಕೀ), ಐಡೆನ್ ಮಾರ್ಕ್ರಾಮ್, ಟೆಂಬಾ ಬವುಮಾ (ನಾಯಕ), ಮ್ಯಾಥ್ಯೂ ಬ್ರೀಟ್ಜ್ಕೆ, ಟೋನಿ ಡಿ ಜೋರ್ಜಿ, ಡೆವಾಲ್ಡ್ ಬ್ರೆವಿಸ್, ಮಾರ್ಕೊ ಜಾನ್ಸೆನ್, ಕಾರ್ಬಿನ್ ಬಾಷ್, ಕೇಶವ್ ಮಹಾರಾಜ್, ನಾಂದ್ರೆ ಬರ್ಗರ್, ಲುಂಗಿ ಎನ್‌ಗಿಡಿ.
ನೇರ ಪ್ರಸಾರ
- ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ / ಜಿಯೋ-ಹಾಟ್‌ಸ್ಟಾರ್
- ಪಂದ್ಯ ಆರಂಭ: ಮಧ್ಯಾಹ್ನ 1:30
