July 29, 2026
kpnnews.com
ಬೆಂಗಳೂರು ಸುದ್ದಿರಾಜಕೀಯರಾಜ್ಯ

Karnataka CM Resignation LIVE | ಸಿದ್ದರಾಮಯ್ಯ ರಾಜೀನಾಮೆ ಘೋಷಣೆ, ರಾಜ್ಯಸಭಾ ಸ್ಥಾನ ನಿರಾಕರಣೆ

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಮುಖ್ಯಮಂತ್ರಿ ಬದಲಾವಣೆಗೆ ತೆರೆ ಎಳೆದಿದ್ದು, ಸಿದ್ದರಾಮಯ್ಯ ಅವರು ಗುರುವಾರ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ.

ರಾಜೀನಾಮೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ವರಿಷ್ಠರು ತಮಗೆ ರಾಜ್ಯಸಭಾ ಸ್ಥಾನ ನೀಡುವುದಾಗಿ ತಿಳಿಸಿದ್ದರೂ, ತಾವು ಅದನ್ನು ನಿರಾಕರಿಸಿರುವುದಾಗಿ ಸ್ಪಷ್ಟಪಡಿಸಿದರು. “ರಾಷ್ಟ್ರ ರಾಜಕಾರಣದಲ್ಲಿ ನನಗೆ ಆಸಕ್ತಿ ಇಲ್ಲ. ಆದ್ದರಿಂದ ನಾನು ರಾಜ್ಯಸಭಾ ಸ್ಥಾನವನ್ನು ನಯವಾಗಿ ನಿರಾಕರಿಸಿದ್ದೇನೆ” ಎಂದು ಹೇಳಿದರು.

ಅವರು ಮುಂದುವರೆದು, “ನನ್ನ ಕೊನೆಯ ಉಸಿರು ಇರುವವರೆಗೂ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಸುತ್ತೇನೆ. ಸಂವಿಧಾನದ ವಿರುದ್ಧ ಕೆಲಸ ಮಾಡುವವರ ವಿರುದ್ಧ ಹೋರಾಟ ನಿಲ್ಲುವುದಿಲ್ಲ” ಎಂದು ಘೋಷಿಸಿದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಗೊಂದಲಕ್ಕೆ ತೆರೆ ಎಳೆದಿರುವ ಈ ಬೆಳವಣಿಗೆ, ಮುಂದಿನ ರಾಜಕೀಯ ಸಮೀಕರಣಗಳಿಗೆ ಮಹತ್ವದ ತಿರುವು ನೀಡಲಿದೆ.

Related posts

2021ರ ಚುನಾವಣೆಗೆ ನಿಂತಿದ್ದರೆ ನಾನೇ ಗೆಲ್ಲುತ್ತಿದ್ದೆ’: ಸಿಎಂ ವಿಜಯ್, ಸ್ಟಾಲಿನ್ ಭೇಟಿ ಬಗ್ಗೆ ತಲೈವಾ ಓಪನ್ ಟಾಕ್!

megopalk@gmail.com

CWC ಸದಸ್ಯರಾಗಿ ಸಿದ್ದರಾಮಯ್ಯ ಆಯ್ಕೆ: ದೇಶ ಮಟ್ಟದಲ್ಲಿ ಕೈ ಪಡೆಗೆ ಹೊಸ ಆನೆಬಲ ಎಂದ ಸುರ್ಜೇವಾಲಾ!

KPN NEWS KANNADA

“ಜಾತಿ-ಧರ್ಮದ ಯುದ್ಧದಲ್ಲಿ ಪಕ್ಷನಿಷ್ಠೆಗೆ ಬೆಲೆ ಎಲ್ಲಿದೆ?”: ದಿನೇಶ್ ಗುಂಡೂರಾವ್ ಪತ್ನಿ ತಬಸ್ಸುಮ್ ಆಕ್ರೋಶ! ಡಿಕೆಶಿ ಸಂಪುಟ ಜಟಾಪಟಿ ಈಗ ಹೈಕಮಾಂಡ್ ಅಂಗಳಕ್ಕೆ!

KPN NEWS KANNADA

Leave a Comment