29.1 C
Bangalore
June 3, 2026
kpnnews.com
ರಾಜಕೀಯರಾಜ್ಯ

ಸಿದ್ದರಾಮಯ್ಯ ವಿದಾಯ ಭಾಷಣ | ಗ್ಯಾರಂಟಿ ಯಶಸ್ಸು, ಮೋದಿ ವಿರುದ್ಧ ಕಿಡಿ, ಸಂವಿಧಾನ ರಕ್ಷಣೆಗೆ ಶಪಥ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ವಿದಾಯ ಭಾಷಣದಲ್ಲಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದ ಪ್ರಮುಖ ಅಂಶಗಳನ್ನು ನೆನೆದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

🔑 Highlights

  • ಗ್ಯಾರಂಟಿ ಯೋಜನೆ: “ಗ್ಯಾರಂಟಿ ಬಗ್ಗೆ ಅಪಪ್ರಚಾರ ನಡೆದಿತ್ತು. ಆದರೆ ಇಂದು ಕರ್ನಾಟಕ ತಲಾ ಆದಾಯದಲ್ಲಿ ದೇಶದ ನಂಬರ್ 1 ಸ್ಥಾನದಲ್ಲಿದೆ” ಎಂದು ಸಿದ್ದರಾಮಯ್ಯ ಹೇಳಿದರು. 2023ರ ಪ್ರಣಾಳಿಕೆಯಲ್ಲಿ ನೀಡಿದ 550 ಭರವಸೆಗಳಲ್ಲಿ 300 ಈಡೇರಿಸಲಾಗಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಸಂಪೂರ್ಣವಾಗಿ ಜಾರಿಗೆ ತಂದಿದ್ದು, ₹1,40,000 ಕೋಟಿ ವೆಚ್ಚ ಮಾಡಲಾಗಿದೆ.
  • ಕೇಂದ್ರ ಸರ್ಕಾರದ ವಿರುದ್ಧ ಆರೋಪ: ಭದ್ರಾ ಮೇಲ್ದಂಡೆ ಯೋಜನೆಗೆ ಹಣಕಾಸು ನೆರವು ನೀಡದಿರುವುದು, ಜಿಎಸ್‌ಟಿ ಪರಿಹಾರ ಬಾಕಿ, ಜಲ ಜೀವನ್ ಮಿಷನ್‌ನಲ್ಲಿ ₹17,000 ಕೋಟಿ ಬಾಕಿ, ನರೇಗಾ ಅನುದಾನ ನಿಲ್ಲಿಸಿರುವುದನ್ನು ಅವರು ತೀವ್ರವಾಗಿ ಟೀಕಿಸಿದರು.
  • ಸಾಲದ ಆರೋಪಕ್ಕೆ ಪ್ರತಿಕ್ರಿಯೆ: ಬಿಜೆಪಿ ಆರೋಪಿಸಿದಂತೆ ರಾಜ್ಯದ ಮೇಲೆ ಅತಿಯಾದ ಸಾಲ ಮಾಡಿಲ್ಲ. “ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ಅಡಿಯಲ್ಲಿ ಶೇ 3ರ ಮಾನದಂಡ ಮೀರಿಲ್ಲ” ಎಂದು ಸ್ಪಷ್ಟಪಡಿಸಿದರು.
  • ಸಂವಿಧಾನ ಮತ್ತು ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ: “ನನ್ನ ಕೊನೆಯ ಉಸಿರು ಇರುವವರೆಗೂ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುತ್ತೇನೆ. ಸಂವಿಧಾನವೇ ನನ್ನ ನಂಬಿಕೆ” ಎಂದು ಭಾವನಾತ್ಮಕವಾಗಿ ಹೇಳಿದರು. ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ ಎಂಬುದನ್ನು ಅವರು ನೆನಪಿಸಿದರು.

ಗ್ಯಾರಂಟಿ ಬಗ್ಗೆ ಅಪಪ್ರಚಾರ: ಆದ್ರೆ ಕರ್ನಾಟಕ ಈಗ ನಂಬರ್ 1
2023 ರಲ್ಲಿ ಪ್ರಣಾಳಿಕೆಯಲ್ಲಿ 550 ಭರವಸೆ ಕೊಡಲಾಗಿತ್ತು, ಈ ಪೈಕಿ ನುಡಿದಂತೆ ನಡೆದ ಸರಕಾರ 300 ಭರವಸೆ ಈಡೇರಿಸಲಾಗಿದೆ. ಅಲ್ಲದೆ, ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೆವು. ಐದು ಯೋಜನೆಯನ್ನು ಕುಡಾ ಈಡೇರಿಸಿದ್ದೇವೆ. 1,40,000 ಕೋಟಿ ಹಣ ಖರ್ಚು ಮಾಡಲಾಗಿದೆ‌. ಜನತೆಗೆ ಕೊಟ್ಟ ಎಲ್ಲಾ ಭರವಸೆ, ವಚನ ಈಡೇರಿಸುವ ಪ್ರಯತ್ನ ಮಾಡಿದ್ದೇವೆ. ಇದು ನನಗೆ ಮತ್ತು ನನ್ನ ಪಕ್ಷಕ್ಕೆ ಸಂತೃಪ್ತಿ ಕೊಟ್ಟ ವಿಚಾರವಾಗಿದೆ ಎಂದರು.

ಆದರೆ ಗ್ಯಾರಂಟಿ ವಿಚಾರಾಗಿ ನಮ್ಮ ಮೇಲೆ ಅಪಪ್ರಚಾರ ಮಾಡಲಾಯಿತು. ಪ್ರಧಾನಿ ಮೋದಿ ಕೂಡಾ ಗ್ಯಾರಂಟಿ ಬಗ್ಗೆ ಅಪಾರ ಅಪಪ್ರಚಾರ ನಡೆಸಿದ್ದರು. ಆದರೆ ಇದೀಗ ಗ್ಯಾರಂಟಿ ಜಾರಿಯಾದ ಬಳಿಕ ಕರ್ನಾಟಕ ದೇಶದಲ್ಲಿ ತಲಾ ಆದಾಯದಲ್ಲಿ ನಂಬರ್ ಒನ್ ಸ್ಥಾನದಲ್ಲಿ ಇದ್ದೇವೆ ಎಂದು ಕೇಂದ್ರವನ್ನು ಟೀಕಿಸಿದರು. ಅಲ್ಲದೆ ಗ್ಯಾರಂಟಿ ಯೋಜನೆಯಿಂದಾಗಿ ಜನರಿಗೆ ಕೊಂಡು ಕೊಳ್ಳುವ ಶಕ್ತಿ ಹೆಚ್ಚಾಗಿದೆ‌‌ ಎಂದರು.

ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ
ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಈ ವರೆಗೂ ಹಣಕಾಸು ನೆರವು ನೀಡಿಲ್ಲ. ಜಿಎಸ್ ಟಿ ಪರಿಹಾರ‌ , ರಾಜ್ಯದ ಪಾಲು ನೀಡುತ್ತಿಲ್ಲ. ಜಲ ಜೀವನ್ ಮಿಷನ್ ನಲ್ಲೂ 17,000 ಸಾವಿರ ಕೋಟಿ ಬಾಕಿ ಇದೆ. ನರೇಗಾ ಅನುದಾನ ಕುಡಾ ನಿಲ್ಲಿಸಲಾಗಿದೆ ಎಂದರು.

ಮನುಷ್ಯನಿಗೆ ಬದುಕಿನ ಪ್ರಾಥಮಿಕ ಅಗತ್ಯತೆಗಳಿಗೆ ಆದ್ಯತೆ ಕೊಡಿಸಬೇಕು ಎಂದು ನಂಬಿದ್ದೇನೆ. ಅದಕ್ಕಾಗಿ ಸಮಾಜದ ಎಲ್ಲಾ ಬಡವರಿಗೆ ಗ್ಯಾರಂಟಿ ಮೂಲಕ ಕರ್ನಾಟಕದಲ್ಲಿ ಅನುಕೂಲ ಮಾಡಲಾಗಿದೆ. ಬರ ಬಂದಾಗಲೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನೆಲ, ಜಲ, ಭಾಷೆ ವಿಚಾರವಾಗಿ ರಾಜಿ ಮಾಡಿಲ್ಲ, ಸಾಧ್ಯವಾದಷ್ಟು ಉತ್ತಮ ಆಡಳಿತ ನೀಡಲಾಗಿದೆ ಎಂದರು.

ಸಾಲದ ಆರೋಪ ರಾಜಕೀಯ
ಸಿದ್ದರಾಮಯ್ಯ ರಾಜ್ಯದ ಮೇಲೆ ಸಾಲ ಮಾಡಿದ್ದಾರೆ ಎಂಬ ಬಿಜೆಪಿಯ ಆರೋಪ ಸುಳ್ಳು. ಇದು ರಾಜಕೀಯ ಪ್ರೇರಿತ ಆರೋಪ ಅಷ್ಟೆ. ಆರ್ಥಿಕ ಶಿಸ್ತನ್ನು ಎಂದಿಗೂ ನಾವು ಪಾಲನೆ ಮಾಡಿದ್ದೇವೆ. ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ಅಡಿಯಲ್ಲಿ ಸಾಲ ಮಾಡಿದ್ದೇವೆ, ಶೇ 3 ರ ಮಾನದಂಡ ಮೀರಿಲ್ಲ ಎಂದರು.

ರಾಜಕಾರಣದಲ್ಲಿ ಕೊನೆ ಉಸಿರಿರುವವರೆಗೂ ಕೋಮುವಾದಿ ಶಕ್ತಿ ವಿರುದ್ಧ ಹೊರಾಟ
ಕೊನೆಯ ವಿದಾಯ ಭಾಷಣದಲ್ಲಿಯೂ ವಿಪಕ್ಷ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಅಬ್ಬರಿಸಿದರು. ರಾಜಕಾರಣದಲ್ಲಿ ಕೊನೆಯ ಉಸಿರುವವರೆಗೂ ಕೋಮುವಾದಿ ಶಕ್ತಿ ವಿರುದ್ಧ ಹೋರಾಡುತ್ತೇನೆ. ಯಾಕೆಂದರೆ ಇವುಗಳು ಸಂವಿಧಾನಕ್ಕೆ ವಿರುದ್ಧವಾಗಿದೆ. ನಾನು ಸಂವಿಧಾನದ ಮೇಲೆ ನಂಬಿಕೆ ಇಟ್ಟಿದ್ದೇನೆ. ಸಂವಿಧಾನ ಇಲ್ಲದೇ ಹೋಗಿದ್ದರೆ, ಬಾಬಾ ಸಾಹೇಬ್ ಅಂಬೇಡ್ಕರ್ ಇದನ್ನು ಮಾಡದೇ ಗೋಗಿದ್ದರೆ, ನಾನೂ ಕೂಡಾ ಈಗ ಹೊಲ ಉಳೋದೋ ಏನೇನೋ ಮಾಡ್ತಿದ್ದೆ. ಯಾಕಂದ್ರೆ ನಮ್ಮ ತಂದೆ ತಾಯಿಗಳು ಅವಿದ್ಯಾವಂತರಾಗಿದ್ದರು. ಆದರೆ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಕೊಡುತ್ತದೆ ಎಂದರು. ಹಾಗಾಗಿ ಸಂವಿಧಾನಕ್ಕೆ ಯಾರೇ ಧಕ್ಕೆ ತಂದರೂ ಅವರ ವಿರುದ್ಧ ಹೋರಾಡುತ್ತೇನೆಂದು ಅತ್ಯಂತ ವಿನಮ್ರವಾಗಿ ಹೇಳಲು ಇಷ್ಟಪಡುತ್ತೇನೆ ಎಂದರು.

Related posts

CWC ಸದಸ್ಯರಾಗಿ ಸಿದ್ದರಾಮಯ್ಯ ಆಯ್ಕೆ: ದೇಶ ಮಟ್ಟದಲ್ಲಿ ಕೈ ಪಡೆಗೆ ಹೊಸ ಆನೆಬಲ ಎಂದ ಸುರ್ಜೇವಾಲಾ!

KPN NEWS KANNADA

ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಇಂದು ಡಿ.ಕೆ. ಶಿವಕುಮಾರ್ ಪ್ರಮಾಣ ವಚನ: ಸಂಪುಟ ಸೇರಲಿದ್ದಾರೆ 15 ಸಚಿವರು; ಮೊದಲ ಪಟ್ಟಿಯಿಂದ ಹೆಬ್ಬಾಳ್ಕರ್, ಜಮೀರ್ ಔಟ್?

KPN NEWS KANNADA

Karnataka CM Resignation LIVE | ಸಿದ್ದರಾಮಯ್ಯ ರಾಜೀನಾಮೆ ಘೋಷಣೆ, ರಾಜ್ಯಸಭಾ ಸ್ಥಾನ ನಿರಾಕರಣೆ

megopalk@gmail.com

Leave a Comment